Innastu Bekenna Hrudayakke Rama ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ Sri RamachandrapuraMatha Song
>> YOUR LINK HERE: ___ http://youtube.com/watch?v=2oCRohLd4N4
ಶ್ರೀರಾಮಚಂದ್ರಾಪುರಮಠದ ಗೀತೆ - ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ.. • ಶ್ರೀಭಾರತೀ ಪ್ರಕಾಶನದ ಕೊಡುಗೆ ©Shri Bharathi Prakashana • ರಚನೆ: ಡಾ.ಗಜಾನನ ಶರ್ಮಾ • ಸಂಗೀತ ರಚನೆ ಮತ್ತು ಗಾಯನ: ಸಾಕೇತ ಶರ್ಮಾ • ತಬಲ: ಗಣೇಶ ಭಾಗವತ್ | Gajanana Sharma • ಹಾರ್ಮೋನಿಯಂ ಮತ್ತು ತಾಳ : ಪ್ರಜ್ಞಾನಲೀಲಾಶುಕ ಉಪಾಧ್ಯಾಯ • ಸಹಗಾಯನ: ಕು. ಪೂಜಾ ಭಟ್, ಕು. ಪೃಥ್ವಿ ಭಟ್, ಕು. ಪ್ರಿಯಾಂಕಾ ಭಟ್ • Recorded at Ramashrama, Sri RamachandrapuraMatha, Girinagara, Bangalore • ಈ ಹಾಡನ್ನು ರಚಿಸಿದ ಕವಿ ಶ್ರೀಗಜಾನನ ಶರ್ಮಾ ರವರ ಭಾವ: • ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮಾ... • ಇದೊಂದು ಗೀತೆ. ಇದರ ಕುರಿತು ಇಂದು ಬೆಳಿಗ್ಗೆ ನನ್ನ ಸ್ನೇಹಿತರೊಬ್ಬರು ಲಿಂಕೊಂದನ್ನು ಕಳುಹಿಸಿ ಈ ಹಾಡನ್ನು ಎಂಬತ್ತೆಂಟು ಸಾವಿರ ಜನ ಕೇಳಿದ್ದಾರೆ, ಎರಡು ಸಾವಿರ ಶೇರ್ ಆಗಿದೆ ಎಂದೆಲ್ಲ ಬರೆದಿದ್ದರು. • ಹೌದು, ಕಳೆದ ನಾಲ್ಕು ವರ್ಷಗಳಲ್ಲಿ ಈ ಹಾಡು ಪಡೆದುಕೊಂಡ ವ್ಯಾಪ್ತಿ ನನಗೆ ಆಶ್ಚರ್ಯ ಹುಟ್ಟಿಸಿದೆ. ಇದು ನಾಡಿನ ಉದ್ದಗಲ ವ್ಯಾಪಿಸಿ, ಎಷ್ಟೊಂದು ಜನ ಅದನ್ನು ಭಕ್ತಿಯಿಂದ ಹಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಯೋಚಿಸಿದರೆ ವಿಸ್ಮಯವಾಗುತ್ತದೆ. • 'ನಾನು ನನ್ನ ದೇವರ ಮನೆಯಲ್ಲಿ ಕುಳಿತು ಹತ್ತು ನಿಮಿಷ ಇದನ್ನು ಹಾಡಿಕೊಂಡೆನಾದರೆ ನನ್ನೆಲ್ಲ ಆತಂಕಗಳೂ ಕರಗಿ ಹೋಗುತ್ತವೆ' ಎಂದೊಬ್ಬರು ಹೇಳಿದರೆ, 'ನನಗೆ ಇದನ್ನು ಹೇಳಿಕೊಂಡರೆ ಸಿಗುವ ಸಮಾಧಾನ ಅದ್ವಿತೀಯ' ಎಂದು ಇನ್ನೊಬ್ಬರು. ಇನ್ನು ಅನೇಕರು ಇದರ ಕುರಿತು ವ್ಯಕ್ತ ಪಡಿಸುವ ಭಾವ ನಮಗೆ ಹೌದಾ ಎನ್ನಿಸುತ್ತದೆ. ಖ್ಯಾತ ಗಾಯಕ ಶಂಕರ ಶಾನುಭೋಗರಂತವರು, ಶರ್ಮಾಜಿ, ನಿಮ್ಮ ಹಾಡನ್ನು ಇವತ್ತು ಮುಂಬಯಿಯಲ್ಲಿ ಹಾಡಿದೆ. ಅದ್ಭುತ ಸಮಾಧಾನ ಸಿಕ್ಕಿತು ಎಂದರೆ, ಹಲವು ಯುವ ಗಾಯಕರು ಇದನ್ನು ಹಾಡಿ ಆಶೀರ್ವಾದ ಬೇಡುತ್ತಾರೆ. ಉತ್ತರ ಕನ್ನಡದ ಹರಿಕಥೆ ದಾಸರೊಬ್ಬರು, ಇದನ್ನು ನನ್ನ ಹರಿಕತೆಯಲ್ಲಿ ಬಳಸಿದೆ. ತುಂಬ ಯಶಸ್ವಿಯಾಯಿತು ಎಂದರು. ಕಮ್ಮಟಗಳಲ್ಲಿ, ಯಕ್ಷಗಾನದಲ್ಲಿ, ನಾಟಕದಲ್ಲಿ, ಭಜನಾಮಂಡಲಿಗಳಲ್ಲದೆ ಹಲವು ಸಭೆಗಳಲ್ಲೂ ಇದನ್ನು ಹಾಡಲಾಗುತ್ತಿದೆ ಎಂಬ ಸುದ್ದಿ ಸರ್ವೇಸಾಮಾನ್ಯ. • ನಾಲ್ಕು ವರ್ಷಗಳ ಹಿಂದೆ ಈ ಗೀತೆಯನ್ನು ನಾನು ಬರೆದದ್ದು, ನನ್ನ ಮಗ ಸಾಕೇತ ಶರ್ಮಾ ರಾಗ ಹಾಕಿ ಹಾಡಿದ್ದು ಈಗ ಹಳೆಯ ಕತೆ. ನಂತರದ ದಿನಗಳಲ್ಲಿ ಈ ಗೀತೆ ಪಡೆದುಕೊಂಡ ವ್ಯಾಪ್ತಿಯನ್ನು ಗಮನಿಸಿದಾಗ ಮಾತ್ರ ನನ್ನೊಳಗೆ ನನಗೇ ಸಂಕೋಚವಾಗುತ್ತಿರುವುದು ಸತ್ಯ. • ಹೀಗೆ ಮುಜುಗರವಾದಾಗೆಲ್ಲ ನನಗೆ ನಾನೇ ಒಂದು ಪ್ರಶ್ನೆ ಕೇಳಿಕೊಳ್ಳುತ್ತೇನೆ. ಇದನ್ನು ಬರೆಯುವಾಗ ನನ್ನೊಳಗೆ ಆ ಪ್ರಮಾಣದ ಭಕ್ತಿ ಇತ್ತೇ? ನಾನು ಅಂತಹ ಶ್ರದ್ಧಾವಂತನೆಂಬುದು ನಿಜವೇ? • ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅದಕ್ಕೆ ಉತ್ತರ ಅನುಮಾನ ಎಂಬುದೇ ನಿಜ. • ಹಾಗಿದ್ದ ಮೇಲೆ ಇದು ಒಂದು ತೆರನಾದ ಮೋಸವಲ್ಲವೇ? ಅಕ್ಷರ ದ್ರೋಹವೆನ್ನಿಸುವುದಿಲ್ಲವೇ? ಗೊತ್ತಿಲ್ಲ. ಬರೆಯುತ್ತ ಹೋದಾಗ ನನ್ನ ಮನಸ್ಸಿಗೆ ಹಾಗೆಲ್ಲ ಅನ್ನಿಸಿತು, ಬರೆದೆ. ಹಾಗೆಂದು ನಾನೇನೂ ಯಾರಿಗೂ ಇದೇ ಪರಮ ಸತ್ಯ, ಇದನ್ನೇ ನಂಬಿ, ಹೀಗೇ ಭಾವಿಸಿ ಎಂದೇನೂ ಹೇಳಿಲ್ಲವಲ್ಲ!? • ಜನರ ಭಾವನೆಯನ್ನು ಹೀಗೆ ಉತ್ತೇಜಿಸುವುದು ಸರಿಯೇ ಎಂದು ನೀವು ಕೇಳಿದರೆ, ನನ್ನ ಉತ್ತರ ಗೊತ್ತಿಲ್ಲ ಎಂಬುದೇ! • ಈ ಹಾಡು ರಚನೆಯಾದ ಸಂದರ್ಭ ಮಾತ್ರ ಬಲು ವಿಚಿತ್ರ. ಅದು ನಂದನ ಸಂವತ್ಸರದ (ಇಸವಿ 2012) ಚಾತುರ್ಮಾಸದ ಸಂದರ್ಭ. ನಮ್ಮ ಗುರುಗಳಾದ ಶ್ರೀ ರಾಘವೇಶ್ವರ ಭಾರತಿಯವರು ರಾಮನ ಮೇಲೆ ವಿಶೇಷವಾದ ಹಾಡೊಂದನ್ನು ಬರೆಯಲು ನನಗೆ ಸೂಚಿಸಿದ್ದರು. ಅವರು ಕೊಟ್ಟ ಅವಧಿ ಮೀರುತ್ತ ಬಂದಿದ್ದರೂ ನನಗೆ ಹಾಡು ಬರೆಯಲಾಗಿರಲಿಲ್ಲ. ಅವರು ಮತ್ತೆ ಒತ್ತಾಯಿಸಿ ಕೇಳಿದಾಗ, ಸಧ್ಯದಲ್ಲೇ ಬರೆದು ಕೊಡುತ್ತೇನೆ ಎಂದು ಮಾತನ್ನೇನೋ ಕೊಟ್ಟುಬಿಟ್ಟೆ. • ಆಗ ನಾನು ಇಂಧನ ಇಲಾಖೆ (ಕೆಪಿಟಿಸಿಎಲ್) ಯಲ್ಲಿ ನೌಕರಿಯಲ್ಲಿದ್ದ ಕಾಲ. ಇಲಾಖೆ ತನ್ನ ಅಧಿಕಾರಿಗಳಿಗಾಗಿ ಕೇರಳದ ರೆಸಾರ್ಟ್ ಒಂದರಲ್ಲಿ ಆಡಳಿತಾತ್ಮಕ ಶಿಬಿರವೊಂದನ್ನು ಏರ್ಪಡಿಸಿ ಅದಕ್ಕೆ ನನ್ನನ್ನೂ ನಿಯೋಜಿಸಿತ್ತು. ಶಿಬಿರದಲ್ಲಿ ಒಂದು ದಿನ ನಮ್ಮೆಲ್ಲರನ್ನೂ ಚಹಾ ತೋಟವೊಂದರ ವೀಕ್ಷಣೆಗೆ ಕರೆದೊಯ್ಯುತ್ತಿದ್ದಾಗ ನನ್ನ ಮನಸ್ಸಿನಲ್ಲಿ ಶ್ರೀಗಳಿಗೆ ಹಾಡು ಬರೆದುಕೊಟ್ಟಿಲ್ಲವೆಂಬ ಒತ್ತಡ ತುಂಬಿತ್ತು. ವಾಹನದಲ್ಲಿ ಹೋಗುತ್ತಿರುವಾಗ ಅಲ್ಲಿ ರಸ್ತೆ ಬದಿಗೆ ಜಾಹೀರಾತೊಂದು ಕಣ್ಣಿಗೆ ಬಿತ್ತು. ಅದು, ಯೇ ದಿಲ್ ಮಾಂಗೇ ಮೋರ್ ಎಂದು ಖ್ಯಾತ ಕ್ರಿಕೆಟ್ ಪಟು ಸಚಿನ್ ತೆಂಡುಲ್ಕರ್ ತಂಪು ಪಾನೀಯವೊಂದರ ಕುರಿತು ಜಾಹೀರಾತು ನಡೆಸುವ ಪಟ. ಅದನ್ನು ನೋಡುತ್ತಿದ್ದಂತೆ ನನಗೆ, ಹೃದಯಕ್ಕೆ ಇನ್ನಷ್ಟು ತಂಪು ಪಾನೀಯ ಬೇಕು ಎನ್ನುವ ಬದಲಿಗೆ, ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ ಎಂಬ ಸಾಲು ಹೊಳೆಯಿತು. ಮುಂದೆ ಆ ಸಾಲುಗಳನ್ನೇ ತಿದ್ದಿ ತೀಡಿ ಮುಂದುವರೆಸಿದಾಗ ಈ ಗೀತೆ ಸಿದ್ದವಾಯಿತು. ಅದನ್ನು ಗುರುಗಳಿಗೆ ಕೊಟ್ಟಾಗ ಸಂತೋಷ ಪಟ್ಟರಲ್ಲದೇ ಇದು ನಮ್ಮ ಮಠದ ಗೀತೆಯೆಂದು ಉದ್ಘೋಷಿಸಿದರು. ಇಡೀ ಚಾತುರ್ಮಾಸ ಅದನ್ನು ಹಾಡಿಸಿ, ಕೇಳಿ ಆನಂದಪಟ್ಟರು. ಶ್ರೀಮಠದ ಗೀತೆಯೆಂದು ಅದನ್ನು ಪ್ರತಿವರ್ಷ ಧಾರ್ಮಿಕ ಪಂಚಾಂಗದಲ್ಲೂ ಮುದ್ರಿಸತೊಡಗಿದರು. • ಇದನ್ನು ಇಲ್ಲಿ ಉಲ್ಲೇಖಿಸಲು ಕಾರಣ ನನ್ನ ಕುರಿತು ಕೊಚ್ಚಿಕೊಳ್ಳುವುದಲ್ಲ. ಬದಲಿಗೆ ಈ ಹಾಡನ್ನು ಅನುಭವಿಸಿದ ಕೆಲವರು ನನ್ನನ್ನು ಬಹು ದೊಡ್ಡ ಭಕ್ತ, ವಿದ್ವಾಂಸ, ಕವಿ ಎಂದೆಲ್ಲ ಭಾವಿಸಿದ್ದಾರೆ. ಆದರೆ ವಾಸ್ತವದಲ್ಲಿ ನಾನು ಪರಂಪರೆ, ಸಂಸ್ಕೃತಿಗಳಲ್ಲಿ ಗೌರವವಿರುವ ಒಬ್ಬ ಸಾಧಾರಣ ವ್ಯಕ್ತಿಯೇ ಹೊರತು ನಿತ್ಯ ಅನನ್ಯ ಭಕ್ತಿಯಿಂದ ಭಗವದರ್ಚನೆ ಮಾಡುವ ಶುದ್ಧ ಆನುಷ್ಠಾನ ಉಳ್ಳವನಲ್ಲ. ಹಾಗೆಂದು ದೇವರಿಗೆ ನಮಸ್ಕರಿಸುವ, ಸಾತ್ವಿಕ ಕ್ರಿಯೆಗಳಲ್ಲಿ ಆಸ್ಥೆಯುಳ್ಳ ವ್ಯಕ್ತಿ. ಆದರೆ ಕರ್ಮಠನಲ್ಲ. ಇದನ್ನು ಇಲ್ಲಿ ಯಾಕೆ ಉಲ್ಲೇಖಿಸಿದೆನೆಂದರೆ ಕೆಲವರು ನನಗೆ ನಮಸ್ಕಾರ ತಿಳಿಸಿ ಶ್ರದ್ಧಾಭಕ್ತಿಯಿಂದ ಉದ್ದದ ಪತ್ರ ಬರೆದಿದ್ದಾರೆ. ಕೆಲವು ಸಭೆಗಳಲ್ಲಿ ಈ ಹಾಡಿಗಾಗಿ ನನಗೆ ನಮಸ್ಕರಿಸಿದ್ದಾರೆ. ಆದರೆ ನಾನು ಅಂತಹ ಗೌರವಕ್ಕೆ ಅರ್ಹನಲ್ಲ. • ನಿಜ, ಗೀತೆ ಯಾರಿಗಾದರೂ ಸಮಾಧಾನ ಕೊಟ್ಟರೆ ನನಗೆ ತೃಪ್ತಿ ಮತ್ತು ಸಂತೋಷ ಉಂಟಾಗುವುದು ಸತ್ಯ. ಆದರೆ ಸದ್ಭಕ್ತರ ನಮಸ್ಕಾರ ಪಡೆಯುವಷ್ಟು ಹಿರಿತನ ನನ್ನಲ್ಲಿ ಇಲ್ಲ. ಕೇವಲ ನಾನೊಬ್ಬ ಗೀತೆ ರಚನೆಕಾರ. • ಈ ಹಾಡನ್ನು ಮೊದಲು ಸಾಕೇತ ಶರ್ಮಾ ಹಾಡಿದ ಇದರ ಲಿಂಕ್ ಇಲ್ಲಿ ಹಾಕುತ್ತಿದ್ದೇನೆ. ಆಸಕ್ತರು ಆಲಿಸಬಹುದು. • / innashtu-bekenna • Facebook: / shankarapeetham • Twitter: / shankarapeetha • Youtube: / shankarapeetha • Website: http://www.srisamsthana.org • Blog: http://hareraama.in
#############################
