🔴 2nd PUC Kannada Notes Guide ಕದಡಿದ ಸಲಿಲಂ ತಿಳಿವಂದದೆ kadadida salilam tilivandade 🎧 ಪ್ರಶ್ನೋತ್ತರಗಳು











>> YOUR LINK HERE: ___ http://youtube.com/watch?v=sMrYCGvODvw

🎧 ಒಂದು ಅಂಕದ ಪ್ರಶ್ನೆಗಳು : • 0:11 1. ರಾವಣನ ಎದುರು ಪ್ರತ್ಯಕ್ಷವಾದ ವಿದ್ಯಾದೇವತೆ ಯಾರು? • ಬಹುರೂಪಿಣೀ ವಿದ್ಯೆ - ರಾವಣನ ಎದುರು ಪ್ರತ್ಯಕ್ಷವಾದ ವಿದ್ಯಾದೇವತೆ. • 0:20 2. ಯಾರನ್ನು ಕೊಲ್ಲುವುದಿಲ್ಲವೆಂದು ವಿದ್ಯಾದೇವತೆ ಹೇಳಿತು? • ರಾಮ-ಲಕ್ಷ್ಮಣರನ್ನು ಕೊಲ್ಲುವುದಿಲ್ಲವೆಂದು ವಿದ್ಯಾದೇವತೆ ಹೇಳಿತು. • 0:35 3. ಮಯತನೂಜೆ ಎಂದರೆ ಯಾರು? • ಮಯತನೂಜೆ ಎಂದರೆ ಮಂಡೋದರಿ. • 0:11 4. ಸೀತೆಯನ್ನು ರಾವಣ ಎಲ್ಲಿರಿಸಿದ್ದನು? • ಸೀತೆಯನ್ನು ರಾವಣ ಪ್ರಮದವನದಲ್ಲಿ ಇರಿಸಿದ್ದನು. • 0:43 5. ರಾವಣನ ಆಗಮನವನ್ನು ಸೀತೆಗೆ ತೋರಿದವರು ಯಾರು? • ರಾವಣನ ಆಗಮನವನ್ನು ಸೀತೆಗೆ ತೋರಿದವರು ಆಕೆಯ ಪಕ್ಕದಲ್ಲಿದ್ದ ರಾಕ್ಷಸ ಸ್ತ್ರೀಯರು. • 0:54 6. ಸೀತೆ ಯಾವುದನ್ನು ಹುಲ್ಲಿಗೆ ಸಮಾನವೆಂದು ಭಾವಿಸಿದಳು? • ಸೀತೆಯು ರಾವಣನ ಅಪ್ರತಿಮವಾದ ರೂಪವನ್ನು ಹುಲ್ಲಿಗೆ ಸಮಾನವೆಂದು ಭಾವಿಸಿದಳು. • 1:04 7. ಸೀತೆ ರಾವಣನನ್ನು ಏನೆಂದು ಬೇಡಿಕೊಂಡಳು? • “ಕರುಣಿಸುವುದಿದ್ದರೆ ದಶವದನನೇ, ಶ್ರೀರಾಮನ ಆಯುಃಪ್ರಾಣ ತೀರುವ ತನಕ ಇಲ್ಲಿಗೆ ಬರಬೇಡ” • ಎಂದು. ಸೀತೆ ರಾವಣನನ್ನು ಬೇಡಿಕೊಂಡಳು. • 1:16 8. ರಾವಣನಿಗೆ ಯಾರ ಬಗ್ಗೆ ವೈರಾಗ್ಯ ಮೂಡಿತು? • ರಾವಣನಿಗೆ ಸೀತೆಯ ಬಗ್ಗೆ ವೈರಾಗ್ಯ ಮೂಡಿತು. • 1:24 9. ವಿಭೀಷಣ ಯಾರು? • ವಿಭೀಷಣ ರಾವಣನ ತಮ್ಮ. • 1:29 10. ಸೌಮಿತ್ರಿ ಎಂದರೆ ಯಾರು? • ಸೌಮಿತ್ರಿ ಎಂದರೆ ಲಕ್ಷ್ಮಣ • 🎧 ಎರಡು ಅಂಕಗಳ ಪ್ರಶ್ನೆಗಳು : • 1:40 1. ಬಹುರೂಪಿಣೀ ವಿದ್ಯೆಯು ರಾವಣನಿಗೆ ಏನೆಂದು ಆಶ್ವಾಸನೆಯಿತ್ತಿತು? • ಬಹುರೂಪಿಣೀ ವಿದ್ಯೆಯು ರಾವಣನ ಎದುರು ಪ್ರತ್ಯಕ್ಷವಾಗಿ ‘ಚಕ್ರಧಾರಿಯಾದ ಲಕ್ಷ್ಮಣನನ್ನು ಮತ್ತು • ಚರಮ ದೇಹಧಾರಿಯಾದ ರಾಮನನ್ನು ಬಿಟ್ಟು ಮಿಕ್ಕವರನ್ನೆಲ್ಲ ನಾಶಗೊಳಿಸುತ್ತೇನೆ’ - ಎಂದು • ಆಶ್ವಾಸನೆಯಿತ್ತಿತು. • 1:58 2. ರಾವಣ ತನ್ನ ಅಂತಃಪುರದ ಸ್ತ್ರೀಯರನ್ನು ಹೇಗೆ ಸಂತೈಸಿದನು? • ಮಂಡೋದರಿಯನ್ನು ಮತ್ತು ಸಮಸ್ತ ಅಂತಃಪುರದ ಸ್ತ್ರೀಯರನ್ನು ನೋಡಿದ ರಾವಣನು • ಅವರನ್ನುದ್ದೇಶಿಸಿ, “ನಿಮಗಿಷ್ಟು ಅಪಮಾನವನ್ನುಂಟುಮಾಡಿದ ಅಂಗದಾದಿಗಳನ್ನು ಹುಬ್ಬು ಗಂಟಿಕ್ಕುವ • ಮಾತ್ರದಿಂದಲೆ ಬಂಧಿಸಿ, ಸೆರೆಹಿಡಿದು ನಿಮ್ಮ ಮುಂದೆ ತಂದು ದಂಡಿಸುವುದರ ಮೂಲಕ ನಿಮಗಾದ • ಅಪಮಾನವನ್ನು ಕಳೆಯುತ್ತೇನೆ” - ಎಂದು ಸಂತೈಸಿದನು. • 2:25 3. ಸೀತೆಯ ತಲ್ಲಣಕ್ಕೆ ಕಾರಣವೇನು? • ರಾವಣನ ಅಪ್ರತಿಮವಾದ ರೂಪವು ಸೀತಾದೇವಿಗೆ ಹುಲ್ಲುಕಡ್ದಿಗಿಂತಲೂ ಅಲ್ಪವಾಗಿ ತೋರಿತ್ತು. • ರಾವಣನು ಸೀತಾದೇವಿಯ ಬಳಿಗೆ ಬರುವಾಗ ಆಕೆಯು ಕಳವಳಕ್ಕೆ ಒಳಗಾಗುತ್ತಾಳೆ.“ರಾಮಲಕ್ಷ್ಮಣರನ್ನು • ಸಂಬಂಧಿಸಿದಂತೆ ತಾನು ಇನ್ನೇನು ಕೆಟ್ಟವಾರ್ತೆಯನ್ನು ಕೇಳುವೆನೋ” - ಎಂದು ರಾವಣನನ್ನು • ಕಂಡೊಡನೆ ಭೀತಿಗೊಂಡು ನಡುಗತೊಡಗಿದಳು. • 2:51 4. ರಾವಣನು ಸೊಕ್ಕಿನಿಂದ ಸೀತೆಯನ್ನುದ್ದೇಶಿಸಿ ಆಡಿದ ಮಾತುಗಳಾವುವು? • ರಾವಣನು ಸೊಕ್ಕಿನಿಂದ ಸೀತೆಯನ್ನುದ್ದೇಶಿಸಿ “ಬಹುರೂಪಿಣೀ ವಿದ್ಯೆಯನ್ನು ನಾನು ಸಾಧಿಸಿದ್ದೇನೆ. ಇನ್ನು • ನನಗೆ ಅಸಾಧ್ಯವಾದ ಕಾರ್ಯ ಯಾವುದೂ ಇಲ್ಲ, ನೀನು ರಾಮನ ಯೋಚನೆಯನ್ನು ಬಿಟ್ಟು, ನನ್ನನ್ನು • ಹೊಂದಿ ಸಾಮ್ರಾಜ್ಯ ಸುಖವನ್ನು ಅನುಭವಿಸು” - ಎಂದನು. • 3:14 5. ರಾವಣನಿಗೆ ಸೀತೆಯ ಬಗ್ಗೆ ವೈರಾಗ್ಯ ಮೂಡಿದ ಸಂದರ್ಭವನ್ನು ವಿವರಿಸಿ. • ಸೀತೆಯು ಮೂರ್ಛಿತೆಯಾಗಲು ರಾವಣನಿಗೆ ಆಕೆಯ ಮೇಲೆ ಅನುಕಂಪ ಹುಟ್ಟಿತು. • ಕರುಣೆದೋರುತ್ತಾನೆ. ಅಲ್ಲದೆ ತನ್ನ ಕರ್ಮಾಧೀನತೆಯಿಂದ ಹುಟ್ಟಿದಂತಹ ಕೆಟ್ಟ ಪಾಪದ ಘೋರ • ಪರಿಣಾಮವನ್ನು ತಾನೇ ಹಳಿದುಕೊಳ್ಳುತ್ತಾನೆ. ಕದಡಿ ಹೋದ ಕೊಳದ ನೀರು ತನ್ನಷ್ಟಕ್ಕೇ • ತಿಳಿಗೊಳ್ಳುವಂತೆ, ರಾವಣನಿಗೆ ತನ್ನೊಳಗೆ ಬದಲಾವಣೆಯಾಗಿ ಸೀತೆಯ ಬಗ್ಗೆ ವೈರಾಗ್ಯ ಮೂಡಿತು. • 3:41 6. ರಾವಣನು ತನ್ನ ಆಪ್ತರನ್ನು ಕುರಿತು ಏನೆಂದು ಹೇಳಿದನು? • ರಾವಣನು ತನ್ನ ಆಪ್ತರನ್ನು ಕುರಿತು ‘ಸದ್ಗುಣಗಳನ್ನು ಆಚರಣೆಯಲ್ಲಿ ಉಳಿಸಿಕೊಳ್ಳಲೆಂದೇ ಈಕೆ ನನ್ನ ಬಗೆಗೆ ಆಸಕ್ತಿಯನ್ನು • ತೋರಲಿಲ್ಲ. ನಾನು ಹೊಂದಿದ್ದ ದಿವ್ಯವಾದ ವಸ್ತ್ರ, ಆಭರಣ, ಅಂಗ ಸುಖದ ಆಮಿಷಗಳನ್ನು ಒಪ್ಪದೆ ಗಂಧರ್ವ • ರಾಜ್ಯಲಕ್ಷ್ಮಿಯನ್ನು ಹುಲ್ಲುಕಡ್ಡಿಗಿಂತಲೂ ಕಡೆಯಾಗಿ ಕಂಡ ಈಕೆಯನ್ನು, ಪರಾಕ್ರಮಿಯಾದ ನಾನು ಅಪೇಕ್ಷಿಸಬಹುದೇ? • ಹೀಗೆ ಕೆಟ್ಟ ಪಾಪ ಸಂಚಯನ ಮಾಡಿಕೊಳ್ಳಬಹುದೇ?’ ಎಂದನು. • 4:11 7. ಈಗಲೇ ಸೀತೆಯನ್ನು ರಾಮನಿಗೊಪ್ಪಿಸಲು ರಾವಣ ಬಯಸಲಿಲ್ಲವೇಕೆ? • ಈಗಲೇ ಸೀತೆಯನ್ನು ಕೊಂಡೊಯ್ದು ರಾಘವನಿಗೊಪ್ಪಿಸಿದೆಯೆಂದಾದರೆ, ನನ್ನ ಪರಾಕ್ರಮ, ಹೆಚ್ಚಿನದ್ದಾದ • ಸಾಮಥ್ರ್ಯ, ವೀರತ್ವ, ಗಳಿಸಿದ ಹೆಸರು-ಬಿರುದುಗಳೆಲ್ಲವೂ ವ್ಯರ್ಥವಾಗಿ ಹೋಗುತ್ತವೆ, ಮುಂದೆಂದೂ • ಸರಿಪಡಿಸದಂತೆ ಕೆಟ್ಟು ಹೋಗುತ್ತವೆ ಎಂದು ಸೀತೆಯನ್ನು ರಾಮನಿಗೊಪ್ಪಿಸದೇ ಇರಲು ನಿರ್ಧರಿಸುತ್ತಾನೆ. • 4:36 8. ರಾವಣನು ಅಂತಿಮವಾಗಿ ಯಾವ ನಿರ್ಧಾರಕ್ಕೆ ಬರುತ್ತಾನೆ? • ರಾವಣನು ಅಂತಿಮವಾಗಿ ತನ್ನ ಬಾಹುಬಲವನ್ನು ಎರಡು ಸೇನೆಗಳೂ ಹೊಗಳುವಂತೆ ಯುದ್ಧ ಮಾಡಿ, • ಯುದ್ಧಾಂತ್ಯದಲ್ಲಿ ರಾಮ ಲಕ್ಷ್ಮಣರನ್ನು ರಥವಿಹೀನರನ್ನಾಗಿ (ರಥ ತ್ಯಜಿಸುವಂತೆ) ಮಾಡಿ, ಸೆರೆಹಿಡಿದು ಆ • ಬಳಿಕ ಸೀತೆಯನ್ನು ಕೊಡುತ್ತೇನೆ ಎನ್ನುವ ನಿರ್ಧಾರಕ್ಕೆ ಬರುತ್ತಾನೆ. • • 🎧 ನಾಲ್ಕು ಅಂಕಗಳ ಪ್ರಶ್ನೆಗಳು (ಐದಾರು ವಾಕ್ಯಗಳಲ್ಲಿ ಉತ್ತರಿಸಿ): • 5:05 1. ರಾವಣನು ಬಹುರೂಪಿಣೀ ವಿದ್ಯೆಯನ್ನು ಒಲಿಸಿಕೊಂಡ ಸಂದರ್ಭವನ್ನು ವಿವರವಾಗಿ ಬರೆಯಿರಿ. • 6:08 2. ಪ್ರಮದವನದಲ್ಲಿ ರಾವಣ - ಸೀತೆಯರ ನಡುವೆ ನಡೆದ ಸಂಭಾಷಣೆಯನ್ನು ವಿವರಿಸಿ. • 7:11 3. ರಾವಣನ ಮನ:ಪರಿವರ್ತನೆಯ ಸಂದರ್ಭವನ್ನು ಕವಿ ಹೇಗೆ ಚಿತ್ರಿಸಿದ್ದಾನೆ? ವಿವರಿಸಿ. • 8:30 4. ರಾವಣನಲ್ಲಿ ಕಂಡುಬರುವ ಪಶ್ಚಾತ್ತಾಪವನ್ನು ಕವಿ ಹೇಗೆ ನಿರೂಪಿಸಿದ್ದಾನೆ? • 9:53 5. ಕದಡಿದ ಸಲಿಲಂ ತಿಳಿವಂದದೆ ಕಾವ್ಯಭಾಗದಲ್ಲಿ ಕಂಡುಬರುವ ರಾವಣನ ವ್ಯಕ್ತಿತ್ವವನ್ನು ವಿಮರ್ಶಿಸಿ • ನಿಮ್ಮ ಮಾತುಗಳಲ್ಲಿ ಉತ್ತರಿಸಿ. • Karnataka 2nd PUC Kannada Textbook Answers, Notes, Guide, Summary, Solutions • 2nd PUC Kannada Notes 2020 • 2nd PUC Kannada Textbook Answers, Notes, Guide • Chapter 1 Kadadida Salilam Tilivandade Questions and Answers, Notes, Guide • 2nd puc Kannada notes • Easy Learn

#############################









Content Report
Youtor.org / YTube video Downloader © 2025

created by www.youtor.org